Posts

FUNDAMENTAL AND TECHNICAL ANALYSIS

 ಸ್ಟಾಕ್ ಮಾರ್ಕೆಟ್ ನಲ್ಲಿ ನೀವು ಹೂಡಿಕೆ ಅಥವಾ  ಟ್ರೇಡಿಂಗ್ ಮಾಡುವಾಗ ಈ ಪದವನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೀರಿ. ನೀವು ಟ್ರೇಡರ್ ಆಗಬೇಕೆಂದರೆ ನಿಮಗೆ ಚೆನ್ನಾಗಿ ಟೆಕ್ನಿಕಲ್ ಅನಾಲಿಸಿಸ್ ಮಾಡಲು ಬರಬೇಕಾಗುತ್ತದೆ. ಅದೇ ರೀತಿ ನೀವೇನಾದರೂ ಹೂಡಿಕೆ ಮಾಡುವ ಯೋಚನೆ ಮಾಡುತ್ತಿದ್ದರೆ ನಿಮಗೆ ಫಂಡಮೆಂಟಲ್ ಅನಾಲಿಸಿಸ್ ಮಾಡಲು ಬರಬೇಕಾಗುತ್ತದೆ. ಟೆಕ್ನಿಕಲ್ ಅನಾಲಿಸಿಸ್ ಸ್ಟಾಕ್ ನ ಬೆಲೆ ಮೇಲೆ ಹೋಗಬಹುದೇ ಅಥವಾ ಕೆಳಕ್ಕೆ ಇಳಿಯಬಹುದೇ ಎಂದು ತಿಳಿಯಲು ಕೇವಲ ಆ ಷೇರಿನ ಕೆಲವು ಹಿಂದಿನ ದಿನಗಳ ಬೆಲೆಯನ್ನು ಇಟ್ಟುಕೊಂಡು ಹಲವು ಟೆಕ್ನಿಕಲ್ ಅನಾಲಿಸಿಸ್ ಟೂಲ್ಸ್ ಅನ್ನು ಬಳಸಿಕೊಂಡು ಟ್ರೇಡ್ ಮಾಡುವ ವಿಧಾನ. ಅದೇ ರೀತಿ ಫಂಡಮೆಂಟಲ್ ಅನಾಲಿಸಿಸ್ ನಲ್ಲಿ ಷೇರಿನ ಹಿಂದಿನ ದಿನಗಳ ಬೆಲೆ, ಕಂಪನಿಯ ಆದಾಯ, ಲಾಭ, ನಷ್ಟ, ಕಂಪನಿಯ ಮುಂದಿನ ಗುರಿ, ಕಂಪನಿಯ ಮ್ಯಾನೇಜ್ಮೆಂಟ್ ಇಂತಹ ಹಲವು ವಿಷಯವನ್ನು ಆಧಾರವಾಗಿಟ್ಟುಕೊಂಡು ಹೂಡಿಕೆ ಮಾಡುವ ವಿಧಾನ ಆಗಿದೆ. ಟೆಕ್ನಿಕಲ್ ಅನಾಲಿಸಿಸ್ ಗೆ ಹೋಲಿಸಿದರೆ ಫಂಡಮೆಂಟಲ್ ಅನಾಲಿಸಿಸ್ ತುಂಬಾ ಪರಿಣಾಮಕಾರಿ ಮತ್ತು ಸುಲಭ ಆಗಿರುತ್ತದೆ. ನೀವು ಟ್ರೇಡರ್ ಆಗುವುದಾದರೆ ನಿಮಗೆ ಟೆಕ್ನಿಕಲ್ ಅನಾಲಿಸಿಸ್ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ಹಾಗೆಯೇ, ನೀವು ಹೂಡಿಕೆ ಮಾಡಲು ನಿಮಗೆ ಫಂಡಮೆಂಟಲ್ ಅನಾಲಿಸಿಸ್ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ಇದು ಕೇವಲ ನಮ್ಮ ಅನಿಸಿಕೆ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿ...

CODING LANGUAGE

  ನಮಗೆ ಪರಸ್ಪರ ವ್ಯವಹರಿಸಲು ಭಾಷೆ ಹೇಗೆ ಬೇಕಾಗುತ್ತದೆ ಅದೇ ರೀತಿ ನಾವು COMPUTER ಹತ್ತಿರ ವ್ಯವಹರಿಸಲು ಕೂಡ ಭಾಷೆ ಬೇಕಾಗುತ್ತದೆ. ನಾವು KANNADA, ENGLISH , HINDI ಹೀಗೆ ಇಂತಹ ಅನೇಕ ಭಾಷೆಯನ್ನು ಬಳಸುತ್ತೇವೆ ಅದೇ ರೀತಿ ಕಂಪ್ಯೂಟರ್ ಹತ್ತಿರ ನಾವು ಏನೇ ಕೆಲಸ ಮಾಡಿಸಲು HTML , PYTHON , C , C++ ಇಂತಹ ಅನೇಕ ಭಾಷೆಗಳನ್ನು ಬಳಸುತ್ತೇವೆ. HTML ಇದು ಒಂದು MARKUP LANGUAGE ಆಗಿದೆ, ಇದನ್ನು ಮುಖ್ಯವಾಗಿ ವೆಬ್ ಸೈಟ್ DEVOLOPE ಮಾಡಲು FRONTEND LANGUAGE ಆಗಿ ಬಳಸುತ್ತೇವೆ. ಇನ್ನು BACKEND LANGUAGE ಆಗಿ PYTHON, C++ , C , JAVA ಮುಂತಾದ ಭಾಷೆಯನ್ನು ಬಳಸುತ್ತೇವೆ. ಆದರೆ, ನೆನಪಿಡಿ ಕಂಪ್ಯೂಟರ್ ಗೆ ಅರ್ಥ ಆಗುವ ಭಾಷೆ BINARY LANGUAGE ಮಾತ್ರ ಆಗಿರುತ್ತದೆ. ಅಂದರೆ, ಕೇವಲ 0 ಮತ್ತು 1 ಅಥವಾ ಇದನ್ನು ನೀವು ONE ಮತ್ತು OFF ಎಂದು ತಿಳಿಯಬಹುದು. ನಾವು ಕಂಪ್ಯೂಟರ್ ಇಂದ ಯಾವುದಾದರೂ ಕೆಲಸವನ್ನು ಮಾಡಬೇಕೆಂದರೆ  ಈ ಭಾಷೆಯನ್ನು ಕಲಿಯುವುದು ಉತ್ತಮ ಆಗಿರುತ್ತದೆ. ಆದರೆ, ನಿಮಗೆ ಇಂದಿನ ದಿನದಲ್ಲಿ  ಕೋಡಿಂಗ್ ಮಾಡದೇ ಕೆಲಸ ಮಾಡುವಂತೆ APPLICATION ಅನ್ನು ರಚಿಸಿರುತ್ತಾರೆ. ಉದಾಹರಣೆ ನೀವು ಯಾರಿಗಾದರೂ  ಒಂದು ಮೆಸೇಜ್ ಕಳುಹಿಸಬೇಕೆಂದರೆ ಸರಳವಾಗಿ ನಿಮಗೆ ಇಷ್ಟ ಆಗುವ ಮೆಸೇಜ್  ಆ್ಯಪ್ ಅನ್ನು ತೆರೆದು ಅಲ್ಲಿಂದ ಮೆಸೇಜ್ ಕಳುಹಿಸುತ್ತಿರಿ , ಅಲ್ಲವೇ? ಆದರೆ, ಆ ಆ್ಯಪ್ ಇದೆ ರೀತಿಯಲ್...

WHY STOCK MARKET

 ನೀವೇನಾದರೂ ಒಳ್ಳೆಯ ಫೈನಾನ್ಸಿಯಲ್ ಜೀವನವನ್ನು ಅನುಭವಿಸಬೇಕು ಎಂದು ಯೋಚನೆ ಮಾಡುತ್ತಿದ್ದರೆ ಮೊದಲು ನೀವು ಮಾಡಬೇಕಾಗಿರುವುದು ನಿಮ್ಮ ದುಡಿಮೆಯ ಹಣದ ಉಳಿತಾಯ. ಏಕೆಂದರೆ, ನೀವು ಯಾವುದೇ ಉದ್ಯಮ ಅಥವಾ ಹೂಡಿಕೆ ಮಾಡುವ ಮೊದಲು ನಿಮಗೆ ಬೇಕಾಗುವುದು ಹಣದ ಬಂಡವಾಳ. ಹಾಗಾಗಿ, ನೀವು ನಿಮ್ಮ ಬಳಿ ಎಷ್ಟು ಸಾಧ್ಯ ಆಗುತ್ತದೆಯೋ ಅಷ್ಟು ಹಣವನ್ನು ಉಳಿತಾಯ ಮಾಡಿ. ನಂತರ, ನೀವು ನಿಮ್ಮದೇ ಸ್ವಂತ ಉದ್ಯಮ ಅಥವಾ ನಿಮಗೆ ಚೆನ್ನಾಗಿ ತಿಳಿದಿರುವ ಕಡೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ. ಆದರೆ, ನಿಮಗೆ ತಿಳಿಯದೆ ಇರುವ ವಿಷಯಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ, ನಿಮ್ಮ ಬಂಡವಾಳ ನಷ್ಟವಾದರೆ ಅದನ್ನು ಪುನಃ ಸಂಪಾದನೆ ಮಾಡುವುದು ತುಂಬಾ ಕಷ್ಟ ಆಗುತ್ತದೆ ಮತ್ತು ನೀವು ಹಣದ ವಿಷಯದಲ್ಲಿ ಬಹಳ ಹಿಂದೆ ಹೋಗುತ್ತೀರಿ. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದರಿಂದ ಹಲವು ಲಾಭವನ್ನು ಪಡೆಯಬಹುದು . ಇಲ್ಲಿ ನೀವು ನಿಮ್ಮ ಬುದ್ಧಿ ಉಪಯೋಗಿಸಿ ನಿಮ್ಮ ಬಳಿ ಇರುವ ಬಂಡವಾಳವನ್ನು ಹೂಡಿಕೆ ಮಾಡುತ್ತೀರಿ ಅದನ್ನು ಹೊರತುಪಡಿಸಿ ನೀವೇ ಖುದ್ದಾಗಿ ಬಿಸಿನೆಸ್ ಅನ್ನು ನಡೆಸುವ ಯೋಚನೆ ಇರುವುದಿಲ್ಲ ಅಲ್ಲದೆ, ನಿಮಗೆ ಯಾವ ಕಂಪನಿ ಇಷ್ಟ ಆಗುತ್ತದೆಯೋ ಅಂತಹ ಕಂಪನಿಯಲ್ಲಿ ಹೂಡಿಕೆ ಮಾಡಬಹುದು. ಹಾಗೂ ನಿಮ್ಮ ಹೂಡಿಕೆಯನ್ನು ಇತರ ಹೂಡಿಕೆಗೆ ಹೋಲಿಸಿದರೆ ಇಲ್ಲಿ ಬಹಳ ಸುಲಭವಾಗಿ ಹಿಂದಕ್ಕೆ ಪಡೆಯಬಹುದು. ಇನ್ನೊಂದು ಮುಖ್ಯ ವಿಶೇಷ ಏನೆಂದರೆ, ಇಲ್ಲಿ ನೀವು ಬಹಳ ಕಡ...

CONTENT IS KING

ನೀವು ಸ್ವಂತ ವೆಬ್ ಸೈಟ್ ಅಥವಾ ಯಾವುದಾದರೂ ಒಂದು ಸೋಶಿಯಲ್ ಮೀಡಿಯಾ ಇಂದ ಹಣವನ್ನು ಗಳಿಸುವ ಬಗ್ಗೆ ಯೋಚನೆ  ಮಾಡುತ್ತಾ ಇದ್ದೀರಿ ಎಂದರೆ ಮೊದಲು ನೀವು ಗಮನ ನೀಡಬೇಕಾಗಿರುವುದು ನಿಮ್ಮ ಕಂಟೆಂಟ್ ನ ಮೇಲೆ . ಏಕೆಂದರೆ, ನೀವು ಯಾರಿಗಾದರೂ ಸಹಾಯ ಆಗುವಂತೆ ಏನಾದರೂ ಮಾಡಿದರೆ ಮಾತ್ರ ಜನರು ನಿಮಗೆ ಹಣ ನೀಡುತ್ತಾರೆ. ನಿಮ್ಮ ಕಂಟೆಟ್ ವಿಭಿನ್ನ ಆಗಿ ಸರಳ ಆಗಿರಬೇಕು. ಇದರಿಂದ ಜನರು ನಿಮ್ಮ ಪೇಜ್ ಗೆ ಭೇಟಿ ನೀಡುವ ಸಂಭವ ತುಂಬಾ ಜಾಸ್ತಿ ಆಗುತ್ತದೆ. ಹಾಗೆಯೇ, ನೀವು ನೀಡುವಂತಹ ವಿಷಯವು ಜನರಿಗೆ ಅವರ ದಿನ ನಿತ್ಯದ ಕೆಲಸಗಳಿಗೆ ಸಹಾಯ ಮಾಡುವಂತೆ ಇರಬೇಕು. ಇನ್ನು ಭಾಷೆ ವಿಷಯಕ್ಕೆ ಬಂದರೆ ನಿಮಗೆ ಯಾವ ಭಾಷೆಯಲ್ಲಿ ಚೆನ್ನಾಗಿ ಓದಲು ಬರೆಯಲು ಮತ್ತು ಅರ್ಥ ಮಾಡಿಕೊಳ್ಳಲು ಬರುತ್ತದೆ ಅಂತಹ ಭಾಷೆಯಲ್ಲಿ ಆರಂಭಿಸಿ. ಹೀಗೆ ಮಾಡುವುದರಿಂದ ನಿಮಗೆ ವಿಷಯವನ್ನು ರಚನೆ ಮಾಡಲು ಸುಲಭ ಮತ್ತು ಕಡಿಮೆ ಸಮಯ ಸಾಕಾಗುತ್ತದೆ. ಹಾಗೂ ನಿಮ್ಮ ಭಾಷೆಯಲ್ಲಿ ಆರಂಭಿಸಿದರೆ ನೀವು ಅಂದುಕೊಂಡಂತೆ ವಿಷಯವನ್ನು ರಚಿಸಬಹುದು. ಇನ್ನು ಯಶಸ್ಸಿನ ವಿಷಯಕ್ಕೆ ಬಂದರೆ ಇದು ಸಂಪೂರ್ಣ ನಿಮ್ಮ ಶ್ರಮ ಮತ್ತು ನೀವು ಎಷ್ಟು ಸಮಯ ನೀಡುತ್ತಿದ್ದೀರಿ ಹಾಗೆಯೇ ನೀವು  ಯಾವ ರೀತಿಯ ವಿಷಯವನ್ನು ನೀಡುತ್ತಿದ್ದೀರಿ ಎನ್ನುವುದರ  ಮೇಲೆ ನಿಂತಿರುತ್ತದೆ. ಯಾವುದೆ ವಿಷಯವನ್ನು ನಕಲಿ ಮಾಡಬೇಡಿ . ಮೊದಲು ಚೆನ್ನಾಗಿ ತಿಳಿದುಕೊಂಡು ಆ ನಂತರ ನಿಮ್ಮದೇ  ಸ್ವಂತ ರಚನೆಯನ್ನು ನೀಡಿ ಜನರಿ...

NOT TIMING THE MARKET TIME IN THE MARKET

 STOCK MARKET ನಲ್ಲಿ ಲಾಭ ಪಡೆಯಬೇಕು ಎಂದಾದರೆ ಮೊದಲು ನೀವು ಮಾರ್ಕೆಟ್ ಅನ್ನು FREDICT ಮಾಡುವುದನ್ನು ನಿಲ್ಲಿಸಿ. ಏಕೆಂದರೆ, ಇದು ನಿಮ್ಮ ಬಂಡವಾಳವನ್ನು ಹಾಗೆಯೇ ನಿಮ್ಮ ನೆಮ್ಮದಿಯನ್ನು ನಷ್ಟ ಮಾಡಬಹುದು. ಯಾವಾಗಲೂ ಹೂಡಿಕೆ ಮಾಡುವವರು  ತಾಳ್ಮೆ ಇರಿಸಿಕೊಳ್ಳಬೇಕು ಹಾಗಾದಾಗ ಮಾತ್ರ ನಿಮ್ಮಿಂದ ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಮಾಡಲು ಸಾಧ್ಯ ಆಗುತ್ತದೆ. ಇಲ್ಲವಾದರೆ ಖಂಡಿತಾ ನೀವು ನಿಮ್ಮ ಎಲ್ಲಾ ಬಂಡವಾಳವನ್ನು ಕಳೆದುಕೊಳ್ಳುತ್ತೀರಿ. ಇಂದು ಯಾವ ಸ್ಟಾಕ್ ನ ಬೆಲೆ ಮೇಲೆ ಹೋಗಬಹುದು ಅಥವಾ ಇಳಿಯಬಹುದು ಎಂದು ಫ್ರೆಡಿಕ್ಟ್ ಮಾಡುತ್ತಾ ಇದ್ದರೆ ಅನಗತ್ಯವಾಗಿ ನೀವು ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿದಂತೆ ಆಗುತ್ತದೆ. ಆರಾಮವಾಗಿ ಹೂಡಿಕೆ ಮಾಡಿ . ಹೂಡಿಕೆ ಮಾಡುವ ಮುನ್ನ ಒಂದು ಬಾರಿ ನೀವು ಆರಿಸಿಕೊಳ್ಳುವ ಕಂಪನಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ ನಂತರ ಹೂಡಿಕೆ  ಆರಂಭಿಸಿ. ಇದರಿಂದ ನೀವು ನಂತರದ ಸಮಯದಲ್ಲಿ ಕಷ್ಟ ಪಡುವ ಅಗತ್ಯ ಬರುವುದಿಲ್ಲ. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ  ನಮ್ಮ ಸಲಹೆ ಆಗಿರುವುದಿಲ್ಲ. 

INTRADAY TRADING

 STOCK MARKET ನಲ್ಲಿ ಈ ಟ್ರೇಡಿಂಗ್ ವಿಧಾನ ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ. ಕಾರಣ, ಇದರಲ್ಲಿ ನಿಮಗೆ ನಿಮ್ಮ ಬಂಡವಾಳದ ಮೊತ್ತಕ್ಕೆ 5 x MARGIN MONEY ಯಾನ್ನು ನೀಡಲಾಗುತ್ತದೆ. ಅಂದರೆ, ನಿಮ್ಮ ಬಳಿ 100000 ರೂಪಾಯಿ ಬಂಡವಾಳ ಇದ್ದರೂ ನೀವು 500000 ರೂಪಾಯಿಯ ಟ್ರೇಡ್ ಅನ್ನು ಮಾಡಬಹುದು. ಇದರಿಂದ ನಿಮ್ಮ ಲಾಭ ಹೆಚ್ಚಾಗುತ್ತದೆ. ಅದೇ ವೇಳೆ ನಿಮಗೆ ನಷ್ಟ ಆದರೆ ಅದು ಕೂಡ ಹೆಚ್ಚಾಗಿಯೇ ಆಗುತ್ತದೆ. ಇನ್ನು ನೀವು ಇಲ್ಲಿ ಯಾವುದೇ ಸ್ಟಾಕ್ ಅನ್ನು ಮೊದಲು ಖರೀದಿಸಿ ನಂತರ ಮಾರಾಟ ಮಾಡಬಹುದು ಅಥವಾ ಮೊದಲು ಮಾರಾಟ ಮಾಡಿ ನಂತರ ಖರೀದಿ ಮಾಡಬಹುದು. ಹೀಗೆ ಮಾಡುವುದನ್ನು SHORT SELL ಎಂದು ಕರೆಯಲಾಗುತ್ತದೆ. ಹಾಗೆಯೇ, ಇಲ್ಲಿ ನೀವು ನಿಮ್ಮ ವ್ಯವಹಾರವನ್ನು ಕೇವಲ ಒಂದೇ ದಿನದಲ್ಲಿ ಮಾಡಿ ಮುಗಿಸಬೇಕು ಇದು ಇದರ ಒಂದು RUELS ಆಗಿದೆ. ಎಲ್ಲಾ ಹಣವನ್ನು  INTRADAY ಟ್ರೇಡಿಂಗ್ ನಲ್ಲಿ ಹಾಕಿ ಟ್ರೇಡ್ ಮಾಡುವುದು ಅಷ್ಟೊಂದು ಸುರಕ್ಷಿತ ಆಗಿರುವುದಿಲ್ಲ. ನೀವು intraday ಮಾಡುವ ಬದಲು SHORT TERM ಮಾಡಬಹುದು ಇದು ನಿಮಗೆ ಸ್ವಲ್ಪ ಆರಾಮವಾಗಿ ಇರಬಹುದು. ಅದೇ ರೀತಿ ಲಾಂಗ್ ಟರ್ಮ್ ಟ್ರೇಡಿಂಗ್ ಅಥವಾ INVESTMENT ಮಾಡಿದರೆ ಇನ್ನು ಉತ್ತಮ ಆಗಿರುತ್ತದೆ. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ. 

SKILL AND FINANCE

ಇಂದಿನ ದಿನದಲ್ಲಿ ಓದಿಕೊಂಡಿರುವ ಎಲ್ಲರಿಗೂ ಕೆಲಸ ಸಿಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ . ಈಗ ಏನಿದ್ದರೂ ಕೆಲಸಕ್ಕೆ ಬರುವುದು ನಿಮ್ಮ SKILLS ಆಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಬಹಳ ವಿಶೇಷ ಜ್ಞಾನ ಇರುತ್ತದೆ ಅದನ್ನು ಸರಿಯಾಗಿ ಬಳಸಿಕೊಂಡು ಅದರಿಂದಲೇ ನಿಮ್ಮ ಜೀವನ ನಿರ್ವಹಣೆ ಮಾಡಬಹುದು. ಆದರೆ, ಇದಕ್ಕೆ ಮುಖ್ಯವಾಗಿ ಬೇಕಾಗುವುದು ನಿಮ್ಮ ಶ್ರಮ ಹಾಗೂ ಆಸಕ್ತಿ. ಇಂದಿನ ದಿನದಲ್ಲಿ ಹಣವನ್ನು ಸಂಪಾದಿಸುವುದು ಕಷ್ಟವಲ್ಲ. ಆದರೆ, ನೀವು ಅಂದುಕೊಂಡಿರುವ ಕೆಲಸ ಮಾಡಿ ಅಂದುಕೊಂಡಿರುವಷ್ಟು  ಹಣ ಸಂಪಾದನೆ ಮಾಡುವುದು ಮಾತ್ರ ಕಷ್ಟ ಆಗುತ್ತಿದೆ. ನೀವು ಬೇರೆಯವರಿಗಿಂತ ಯಾವುದೇ ಕೆಲಸವನ್ನು ಇನ್ನು ವಿಶೇಷವಾಗಿ ಹೇಗೆ ಮಾಡಬಹುದು ಎಂದು ಯೋಚಿಸಿ ಅದೇ ರೀತಿ ಮಾಡಲು ಆರಂಭಿಸಿ. ಬಹಳ ಜನರು ಯೋಚನೆ ಮಾಡುವುದು ಸಾಮಾನ್ಯವಾಗಿ ಏನೆಂದರೆ, ನಾವು ಇನ್ನು ವಿಶೇಷವಾಗಿ ಏನು ಮಾಡಲು ಸಾಧ್ಯ ? ಎಲ್ಲವೂ ಈಗಾಗಲೇ ಇದೆ . ಇಂತಹ ಯೋಚನೆಯಿಂದ ಎಷ್ಟು ಬೇಗ ಹೊರಗಡೆ ಬರುತ್ತಿರೋ ಅಷ್ಟು ಬೇಗ ನೀವು ಯಶಸ್ಸನ್ನು ಹೊಂದುತ್ತಿರಿ. THINK DIFFERENT  DO DIFFERENT ಎನ್ನುವ ಹಾಗೆ ನೀವು ಯಾವಾಗಲೂ ಭಿನ್ನವಾಗಿ ಯೋಚನೆ ಮಾಡುತ್ತಿರಬೇಕು . ಹಾಗೆಯೇ , ನಿಮ್ಮ ಬಳಿ ಇರುವ TALENTS ಅನ್ನು ಚೆನ್ನಾಗಿ ಬಳಸಿಕೊಳ್ಳಿ. ಯವುದೇ ಕೆಲಸವನ್ನು ಆರಂಭಿಸುವ ಮೊದಲು ನಿಮಗೆ ಇಷ್ಟ ಇರುವ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಸರಿಯಾಗಿರುವ ಕೆಲಸವನ್ನು ಮಾತ್ರ ಮಾಡಿ. ಇಲ...

AFFILIATE MARKET

 ONLINE ನಲ್ಲಿ ಹಣ ಗಳಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇದು ನಿಮಗೆ ಬಹಳ ಸುಲಭ ಮತ್ತು ಯಾವುದೇ ಬಂಡವಾಳ ಇಲ್ಲದೆ ಹಾಗೂ ಮನೆಯಲ್ಲೇ  ಮಾಡಬಹುದಾದ ಒಂದು ಉದ್ಯಮ ಆಗಿದೆ . ಉದ್ಯಮ ಎಂದು ಕರೆಯಲು ಕಾರಣ ಏನೆಂದರೆ, ಇಲ್ಲಿ ನೀವು ನಿಮಗೆ ಇಷ್ಟ ಬಂದ ಸಮಯದಲ್ಲಿ ಕೆಲಸ ಮಾಡಬಹುದು . ಒಂದು ವೇಳೆ ಮಾಡದೇ ಇದ್ದರೂ ಯಾವುದೇ ಸಮಸ್ಯೆ ಇಲ್ಲ . ಹಾಗೆಯೇ, ನೀವು ಏನು ಕೆಲಸ ಮಾಡದೆ ಇದ್ದಾಗಲೂ ಇದರಿಂದ ನಿಮಗೆ ಹಣ ಸಿಗುತಿರುತ್ತದೆ. ಹೇಗೆಂದರೆ , ಇಲ್ಲಿ ನೀವು URL LINK ಮುಖಾಂತರ ವ್ಯವಹಾರ ನಡೆಸುತ್ತಿರಿ . ಅಂದರೆ , ನೀವು AFFILIATE PROGRAM ಹೊಂದಿರುವ ಯಾವುದೇ ಕಂಪನಿಯ ವೆಬ್ ಸೈಟ್ ಇಂದ ನಿಮಗೆ ಇಷ್ಟ ಆಗುವ ವಸ್ತು ಅಥವಾ ಸೇವೆಯನ್ನು  ಆಯ್ಕೆ ಮಾಡಿಕೊಂಡು ಅದರ ಲಿಂಕ್ ಅನ್ನು ನಿಮ್ಮ ವೆಬ್ ಸೈಟ್ , YOUTUBE chanel , ಅಥವಾ ಯಾವುದಾದರೂ  ಸೋಶಿಯಲ್ ಮೀಡಿಯಾದಲ್ಲಿ UPLOAD ಮಾಡಬೇಕಾಗುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಯಾರಾದರೂ ಏನನ್ನಾದರೂ ಖರೀದಿ ಮಾಡಿದಾಗ ಅಥವಾ SIGN-UP ನಂತಹ ಕ್ರಿಯೆಯನ್ನು ಪೂರ್ಣಗೊಳಿಸಿದಾಗ ನಿಮಗೆ ನಿಗದಿಪಡಿಸಿದ ಹಣವು COMSSION ರೂಪದಲ್ಲಿ ಸಿಗುತ್ತದೆ. ಇದು ನೀವು ಕೆಲಸ ಮಾಡದೆ ಇದ್ದಾಗಲೂ ನಿಮಗೆ ಹಣವನ್ನು ತಂದುಕೊಡುತ್ತಾ ಇರುತ್ತದೆ. ನೀವು AMAZON, BLUEHOST, COMISSION JUNCTION, EARN KARO ಮುಂತಾದ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಹಣವನ್ನು ಗಳಿಸಲು ಆರಂಭಿಸಬಹುದು. ಇದು ಕೇವಲ ನಮ್ಮ ಅನಿ...

SEARCH ENGINE AND WEB SITE

ನಮ್ಮಲ್ಲಿ GOOGLE ಬಳಕೆ ಮಾಡದೇ ಇರುವವರು ಯಾರೂ ಇರಲು ಸಾಧ್ಯವಿಲ್ಲ . ಎಷ್ಟರ ಮಟ್ಟಿಗೆ ನಾವು ಇದನ್ನು ಬಳಸುತ್ತೇವೆ ಎಂದರೆ ನಾವು ಆನ್ಲೈನ್ ನಲ್ಲಿ ಯಾವುದೇ ವ್ಯವಹಾರವನ್ನು ಮಾಡುವ ಮೊದಲು ಗೂಗಲ್ ಇಂದಲೇ ಆರಂಭಿಸುತ್ತೇವೆ . ಗೂಗಲ್ ಒಂದು SERCH ENGINE ಆಗಿದೆ. ಹಾಗಾದರೆ search engine ಎಂದರೆ ಏನು ? ಸರಳವಾಗಿ ಯಾವುದೇ ಒಂದು search engine ನಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಹುಡುಕಲು ಸಹಾಯ ಮಾಡುತ್ತದೆ. ಇದನ್ನು ತಯಾರು ಮಾಡಿರುವ ಉದ್ದೇಶ ಕೂಡ ಇದೆ ಆಗಿದೆ . ಹಾಗಾದರೆ ಸರ್ಚ್ ಎಂಜಿನ್ ಮಾಹಿತಿಯನ್ನು ಹೇಗೆ ಒದಗಿಸುತ್ತವೆ ? ಅಲ್ಲವೇ . ನಿಮಗೆ ತಿಳಿದಿದೆ ಹಲವಾರು ವಿವಿಧ ಮಾಹಿತಿಯನ್ನು ಹೊಂದಿರುವ ಅಸಂಖ್ಯಾತ ವೆಬ್ ಸೈಟ್ ಗಳು  ಇವೆ ಎಂದು. ಇಂತಹ ವೆಬ್ ಸೈಟ್ ಗಳು search engina ನಲ್ಲಿ  INDEX ಆಗಿರುತ್ತವೆ. ಆಗ ಆಯಾ ವೆಬ್ ಸೈಟ್ ಗಳ ಮಾಹಿತಿಯನ್ನು search engin ಗಳು ತಮ್ಮ ಬಳಿ ಶೇಖರಿಸಿ ಇಟ್ಟುಕೊಂಡಿರುತ್ತವೆ. ಬಳಕೆ ಮಾಡುವವರು ಸರ್ಚ್ ಇಂಜಿನ್ ನಲ್ಲಿ ಯಾವುದಾದರೂ ವಿಷಯವನ್ನು ಟೈಪ್ ಮಾಡುತ್ತಿದ್ದಂತೆ ಆಯಾ ವಿಷಯವು ಯಾವ ಯಾವ ವೆಬ್ ಸೈಟ್ ನಲ್ಲಿ ಇದೆ ಎಂದು ಹುಡುಕಿ ಅದರಲ್ಲಿ ಒಳ್ಳೆಯ ಹೊಂದಾಣಿಕೆ ಇರುವ ವೆಬ್ ಸೈಟ್ ಅನ್ನು ಬಳಕೆ ಮಾಡುವವರಿಗೆ ತಂದು ಕೊಡುತ್ತದೆ. ಇನ್ನು ವೆಬ್ ಸೈಟ್ ಕೇವಲ ತನ್ನದೇ ಆದ ವಿಷಯವನ್ನು ಹೊಂದಿದ್ದು ಅದನ್ನು ಬಳಕೆ ಮಾಡುವವರಿಗೆ ನೀಡುತ್ತದೆ. ಹಲವಾರು ವಿಷಯದ ಮೇಲೆ ಹಲವಾರ...

OWN WEBSITE

ನಿಮ್ಮದೇ ಆದ ಸ್ವಂತ ವೆಬ್ ಸೈಟ್ ಆರಂಭಿಸಿ ಹಣ ಸಂಪಾದನೆ ಮಾಡಲು ಯೋಚನೆ ಮಾಡುತ್ತಿದ್ದೀರಾ ? ಇಂದಿನ ದಿನದಲ್ಲಿ ಇದು ಬಹಳ ಸುಲಭ ಮತ್ತು ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಆಗುತ್ತದೆ. ವೆಬ್ ಸೈಟ್ ತಯಾರು ಮಾಡುವುದು ಹೆಚ್ಚಿನ ಕೆಲಸ ಆಗಿರುವುದಿಲ್ಲ ಬದಲಾಗಿ ನಿಮ್ಮ ವೆಬ್ ಸೈಟ್ ಅನ್ನು ನೀವು ಎಷ್ಟು ಯಶಸ್ವಿಯಾಗಿ ನಡೆಸುತ್ತೀರಿ ಎನ್ನುವುದು ಮುಖ್ಯ ಆಗುತ್ತದೆ. ಇನ್ನು ಮೊದಲು ನೀವು ಯಾವ ರೀತಿಯ ವೆಬ್ ಸೈಟ್ ಅನ್ನು ತಯಾರು ಮಾಡಲು ಯೋಚಿಸಿದ್ದೀರಿ ಎಂದು ಅದನ್ನು ನಿರ್ಧಾರ ಮಾಡಿ . ಹಾಗೆಯೇ, ನೀವು domain name  ಖರೀದಿ ಮಾಡಬೇಕಾಗುತ್ತದೆ . Domain name ನಿಮಗೆ ಉಚಿತವಾಗಿಯೂ ಸಿಗುತ್ತದೆ . ಆದರೆ , ನೀವು ಖರೀದಿ ಮಾಡುವುದು ಉತ್ತಮ . ಹಾಗೆಯೇ , ನೀವು ನಿಮ್ಮ ವೆಬ್ ಸೈಟ್ ನಲ್ಲಿ ವಿಷಯವನ್ನು ಯಾವ ರೀತಿಯಲ್ಲಿ ನೀಡಲು ನಿರ್ಧರಿಸಿದ್ದೀರಿ ಎನ್ನುವುದು ಕೂಡ ಮುಖ್ಯ ಆಗುತ್ತದೆ . ಏಕೆಂದರೆ, ನೀವೇನಾದರೂ ವಿಡಿಯೋದ ಮೂಲಕ ವಿಷಯವನ್ನು ನೀಡಲು ಯೋಚಿಸುತ್ತಿದ್ದರೆ ಸ್ವಂತ ವೆಬ್ ಸೈಟ್ ಮಾಡುವ ಬದಲು ಉಚಿತವಾಗಿ ಮತ್ತು ಸುಲಭವಾಗಿ ಹಾಗೂ ಬಹಳ ಪ್ರಸಿದ್ಧಿ ಆಗಿರುವ YOUTUBE ಅನ್ನು ಬಳಸಿಕೊಳ್ಳಬಹುದು. ಒಂದು ವೇಳೆ ನೀವೇನಾದರೂ ಪಠ್ಯ ಆಧಾರಿತ ವಿಷಯವನ್ನು ನೀಡಲು ಯೋಚಿಸಿದ್ದರೆ ಸ್ವಂತ ವೆಬ್ ಸೈಟ್ ಅನ್ನು ಆರಂಭಿಸಿ. ಕೇವಲ ವಿಷಯವನ್ನು ಓದುಗರಿಗೆ ನೀಡುವಂತಹ ವೆಬ್ ಸೈಟ್ ಮಾಡಲು ನಿಮಗೆ ಸ್ವಲ್ಪ HTML , CSS , ಮತ್ತು JAVASCRIPT  ಬಗ್ಗೆ ತಿಳಿದಿ...

BEST COMPANES FOR INVESTMENT

STOCK MARKET ನಲ್ಲಿ ಹೂಡಿಕೆ ಮಾಡುವ ಮೊದಲು ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ಎನ್ನುವ ಯೋಚನೆ ಬರುವುದು ಸಾಮಾನ್ಯ ಸಂಗತಿ ಆಗಿದೆ. ಏಕೆಂದರೆ, ಇಲ್ಲಿ ನಾವು ಕಷ್ಟಪಟ್ಟು ದುಡಿದ ಹಣವನ್ನು ತಂದು ಹೂಡಿಕೆ ಮಾಡುತ್ತೇವೆ ಹಾಗಾಗಿ ಒಂದು ಸಲ ನಾವು ಹೂಡಿಕೆ ಮಾಡುವ ಮೊದಲು ಕಂಪನಿಯ ಬಗ್ಗೆ ಸ್ವಲ್ಪ ಮಾಹಿತಿಯನ್ನು  ಆದರೂ ತಿಳಿದುಕೊಳ್ಳುವುದು ಅಗತ್ಯ ಆಗಿರುತ್ತದೆ. ಹೆಚ್ಚಿನ ಲಾಭವನ್ನು ನೀಡುವುದು ಸಾಮಾನ್ಯವಾಗಿ ಹೊಸ ಕಂಪನಿಗಳೇ ಆಗಿರುತ್ತದೆ. ಆದರೆ, ಹೂಡಿಕೆಯ ಸುರಕ್ಷೆಯ ದೃಷ್ಟಿಯಿಂದ ಸ್ವಲ್ಪ ಹಳೆಯ ಹಾಗೂ ಈಗಾಗಲೇ ಬಿಸಿನೆಸ್ ವಿಷಯದಲ್ಲಿ ದೃಢವಾಗಿ ನಿಂತಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಒಳ್ಳೆಯದು ಆಗಿರುತ್ತದೆ.  ಅಂತಹ ಕೆಲವು ಕಂಪನಿಗಳು ಯಾವುವೆಂದರೆ, TATA MOTORS , RELIANCE INDUSTRIES , ASIAN PAINTS , INFOSYS  , TCS  , NESTLE ,  SBI ಮುಂತಾದವು . ಒಳ್ಳೆಯ ಸುರಕ್ಷೆಯ ಜೊತೆಗೆ ಒಳ್ಳೆಯ ಸಾಧಾರಣ ಲಾಭ ಪಡೆಯುದಾದರೆ ನೀವು ಈ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು . ನಿಮಗೆ ಹೆಚ್ಚಿನ ಲಾಭ ಬೇಕೆಂದರೆ ಸಾಧಾರಣ ಸುರಕ್ಷೆ ಇರುತ್ತದೆ. ಅಂದರೆ, ನೀವು ಸಣ್ಣ ಕಂಪನಿ ಅಥವಾ ಹೊಸ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಲಾಭ ಜಾಸ್ತಿ ಸಿಗಬಹುದು . ಆದರೆ, ನಷ್ಟ ಆಗುವ ಸಂಭವ ಕೂಡ ಇರುತ್ತದೆ .SUZLON , ZOMATO , YES BANK  ಮುಂತಾದ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆ...

MAKE MONEY ONLINE

 ONLINE ನಲ್ಲಿ ಹಣ ಮಾಡುವ ಕುರಿತು ನೀವು ಬಹಳಷ್ಟು ತಿಳಿದಿರಬಹುದು. ಆದರೆ, ಇಲ್ಲಿ ಹಣವನ್ನು ಗಳಿಸುವುದು ಅಷ್ಟು ಸುಲಭ ಆಗಿರುವುದಿಲ್ಲ. ಇಲ್ಲಿಯೂ ನೀವು ನಿಮ್ಮ ಶ್ರಮವನ್ನು ನೀಡಲೇ ಬೇಕಾಗುತ್ತದೆ. ಅಲ್ಲದೆ, ನೀವು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಆಗುತ್ತದೆ. YOUTUBE, FACEBOOK, INSTAGRAM ಮುಂತಾದ ವೇದಿಕೆಯನ್ನು ಬಳಸಿಕೊಂಡು ನೀವು ಒಳ್ಳೆಯ ಹಣವನ್ನು ಗಳಿಸಬಹುದು. ಆದರೆ, ತಾಳ್ಮೆ , ಶಿಸ್ತು , ಶ್ರಮ ಮತ್ತು ಸಣ್ಣ ಬಂಡವಾಳ ಬೇಕಾಗುತ್ತದೆ. ಮತ್ತು ಬೇರೆಯವರನ್ನು ನೋಡಿ ನೀವು ಅವರಂತೆ ನಕಲು ಮಾಡಲು ಹೋಗಬೇಡಿ. ಬದಲಾಗಿ, ನಿಮಗೆ ಇಷ್ಟ ಇರುವ ಹಾಗೂ ನಿಮ್ಮ ಸಾಮರ್ಥ್ಯಕ್ಕೆ ತಕ್ಕನಾದ ಕೆಲಸವನ್ನು ಮಾಡಿರಿ. ನಿಮಗೆ ನಿಜವಾಗಿಯೂ ಇಷ್ಟ ಇಲ್ಲದ್ದೆ ಇರುವಂತಹ ಯಾವುದೇ ಕೆಲಸವನ್ನು ಕೇವಲ ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ  ಮಾಡಬೇಡಿ. ಇದು ನಿಮಗೆ ಯಶಸ್ಸನ್ನು ನೀಡುವುದಿಲ್ಲ. ಹಾಗೆಯೇ, ಇನ್ನೊಬ್ಬರನ್ನು ಪೂರ್ತಿಯಾಗಿ ನಕಲು ಮಾಡಬೇಡಿ ಇದರಿಂದ ನೀವು ಬೆಳೆಯಲು ಆಗುವುದಿಲ್ಲ. ನೀವು ಜನರಿಗೆ ಏನನ್ನೋ ಹೊಸದಾಗಿ ನೀಡಲು ಪ್ರಯತ್ನಿಸಿ ಇದು ನಿಮಗೆ ಮೊದಲು ಕಷ್ಟ ಎನಿಸಿದರೂ ನಂತರದ ದಿನಗಳಲ್ಲಿ ನಿಮಗೆ ಗೆಲುವನ್ನು ತಂದುಕೊಡುತ್ತದೆ. THINK DIFFERENT DO DIFFERENT . ಇದು ಕೇವಲ ನಮ್ಮ ಅನಿಸಿಕೆ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.

HOME AND BUSINESS

 ದುಡಿಯಲು ಆರಂಭಿಸುತ್ತಿದ್ದಂತೆ ನಮ್ಮ ದೇಶದಲ್ಲಿ  ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಹೇಳುವ ಮಾತು , ದುಡಿದ ಹಣವನ್ನು ಉಳಿತಾಯ ಮಾಡಿ ಆದಷ್ಟು ಬೇಗ ಸಾಲ ಮಾಡಿಯಾದರೂ ಒಂದು ಸ್ವಂತ ಮನೆ ಮಾಡಿ. ಇದು ತಪ್ಪಲ್ಲ ಆದರೆ, ನಾವು ಆರಾಮವಾಗಿ ಉಳಿಯಲು ಒಂದು ಮನೆ ಬೇಕು ಎಂದುಕೊಳ್ಳುವಂತೆ , ನಾವು ದುಡಿದು ಉಳಿತಾಯ ಮಾಡಿದ ಹಣ ನಮಗೋಸ್ಕರ ಡುಡಿಯುವಂತೆ ಮಾಡಲು ಅದಕ್ಕೆ ಒಂದು ಕಡೆ ಜಾಗ ಮಾಡಿಕೊಡಬೇಕಲ್ಲವೇ? ಗಮನಿಸಿ, ನೀವು ನಿಮ್ಮ ಮನೆಗೆ ಎಷ್ಟೇ ಹಣವನ್ನು ಹಾಕಿದರು  ಅದು ಕೇವಲ ನಿಮ್ಮ ಖರ್ಚು ಅಥವಾ ಜವಾಬ್ದಾರಿ ಆಗಿರುತ್ತದೆ. ಅಂದರೆ, ಅದು ನಿಮಗೆ ಪ್ರತಿಯಾಗಿ ಯಾವುದೇ ಹಣವನ್ನು ಸಂಪಾದಿಸಿ ಕೊಡುವುದಿಲ್ಲ . ಬದಲಾಗಿ ನಿಮ್ಮಿಂದ ಸಾಕಷ್ಟು ಹಣವನ್ನು ತೆಗೆದುಕೊಳ್ಳುತ್ತದೆ. ಇಲ್ಲಿ ಬರೆಯಲು ಹೊರಟಿರುವ ವಿಷಯ ಏನೆಂದರೆ, ನೀವು ದುಡಿಯಲು ಆರಂಭಿಸುತ್ತಿದ್ದಂತೆ ಆದಷ್ಟು ಹಣವನ್ನು ಉಳಿತಾಯ ಮಾಡಿರಿ. ಹಾಗೆಯೇ, ನಿಮ್ಮ ಉಳಿತಾಯದ ಹಣವನ್ನು ನಿಮಗೆ ಚೆನ್ನಾಗಿ ತಿಳಿದಿರುವ ಕಡೆಗಳಲ್ಲಿ ಹೂಡಿಕೆ ಮಾಡಿ . ಆ ಹೂಡಿಕೆ ಇಂದ ಒಳ್ಳೆಯ ಲಾಭ ಬರಲು ಆರಂಭ ಆದಾಗಿನಿಂದ ನೀವು ಆ ಲಾಭದ ಹಣವನ್ನು  ನಿಮ್ಮ ಮನೆ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಿ ಅಥವಾ ಸಾಲವನ್ನು ತೆಗೆದುಕೊಂಡು ಮನೆಯನ್ನು ನಿರ್ಮಾಣ ಮಾಡಿ ನಂತರ ನಿಮ್ಮ ಹೂಡಿಕೆಯ ಲಾಭದಿಂದ ಆ ಸಾಲವನ್ನು ಮರುಪಾವತಿ ಮಾಡುತ್ತಾ ಇರಬಹುದು. ಹೀಗೆ ಮಾಡುವುದರಿಂದ ನಿಮ್ಮ ಉಳಿತಾಯದ ಹಣ ಒಂದು ಕಡೆ ನಿಮಗಾಗಿ ಕೆಲಸ ಮಾಡುತ್ತ...