SKILL AND FINANCE

ಇಂದಿನ ದಿನದಲ್ಲಿ ಓದಿಕೊಂಡಿರುವ ಎಲ್ಲರಿಗೂ ಕೆಲಸ ಸಿಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ . ಈಗ ಏನಿದ್ದರೂ ಕೆಲಸಕ್ಕೆ ಬರುವುದು ನಿಮ್ಮ SKILLS ಆಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಬಹಳ ವಿಶೇಷ ಜ್ಞಾನ ಇರುತ್ತದೆ ಅದನ್ನು ಸರಿಯಾಗಿ ಬಳಸಿಕೊಂಡು ಅದರಿಂದಲೇ ನಿಮ್ಮ ಜೀವನ ನಿರ್ವಹಣೆ ಮಾಡಬಹುದು. ಆದರೆ, ಇದಕ್ಕೆ ಮುಖ್ಯವಾಗಿ ಬೇಕಾಗುವುದು ನಿಮ್ಮ ಶ್ರಮ ಹಾಗೂ ಆಸಕ್ತಿ. ಇಂದಿನ ದಿನದಲ್ಲಿ ಹಣವನ್ನು ಸಂಪಾದಿಸುವುದು ಕಷ್ಟವಲ್ಲ. ಆದರೆ, ನೀವು ಅಂದುಕೊಂಡಿರುವ ಕೆಲಸ ಮಾಡಿ ಅಂದುಕೊಂಡಿರುವಷ್ಟು  ಹಣ ಸಂಪಾದನೆ ಮಾಡುವುದು ಮಾತ್ರ ಕಷ್ಟ ಆಗುತ್ತಿದೆ. ನೀವು ಬೇರೆಯವರಿಗಿಂತ ಯಾವುದೇ ಕೆಲಸವನ್ನು ಇನ್ನು ವಿಶೇಷವಾಗಿ ಹೇಗೆ ಮಾಡಬಹುದು ಎಂದು ಯೋಚಿಸಿ ಅದೇ ರೀತಿ ಮಾಡಲು ಆರಂಭಿಸಿ. ಬಹಳ ಜನರು ಯೋಚನೆ ಮಾಡುವುದು ಸಾಮಾನ್ಯವಾಗಿ ಏನೆಂದರೆ, ನಾವು ಇನ್ನು ವಿಶೇಷವಾಗಿ ಏನು ಮಾಡಲು ಸಾಧ್ಯ ? ಎಲ್ಲವೂ ಈಗಾಗಲೇ ಇದೆ . ಇಂತಹ ಯೋಚನೆಯಿಂದ ಎಷ್ಟು ಬೇಗ ಹೊರಗಡೆ ಬರುತ್ತಿರೋ ಅಷ್ಟು ಬೇಗ ನೀವು ಯಶಸ್ಸನ್ನು ಹೊಂದುತ್ತಿರಿ. THINK DIFFERENT  DO DIFFERENT ಎನ್ನುವ ಹಾಗೆ ನೀವು ಯಾವಾಗಲೂ ಭಿನ್ನವಾಗಿ ಯೋಚನೆ ಮಾಡುತ್ತಿರಬೇಕು . ಹಾಗೆಯೇ , ನಿಮ್ಮ ಬಳಿ ಇರುವ TALENTS ಅನ್ನು ಚೆನ್ನಾಗಿ ಬಳಸಿಕೊಳ್ಳಿ. ಯವುದೇ ಕೆಲಸವನ್ನು ಆರಂಭಿಸುವ ಮೊದಲು ನಿಮಗೆ ಇಷ್ಟ ಇರುವ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಸರಿಯಾಗಿರುವ ಕೆಲಸವನ್ನು ಮಾತ್ರ ಮಾಡಿ. ಇಲ್ಲವಾದಲ್ಲಿ ನೀವು ನಿಮ್ಮ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸುವ ಸಂಭವ ಹೆಚ್ಚಾಗಿರುತ್ತದೆ. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.