WHY STOCK MARKET

 ನೀವೇನಾದರೂ ಒಳ್ಳೆಯ ಫೈನಾನ್ಸಿಯಲ್ ಜೀವನವನ್ನು ಅನುಭವಿಸಬೇಕು ಎಂದು ಯೋಚನೆ ಮಾಡುತ್ತಿದ್ದರೆ ಮೊದಲು ನೀವು ಮಾಡಬೇಕಾಗಿರುವುದು ನಿಮ್ಮ ದುಡಿಮೆಯ ಹಣದ ಉಳಿತಾಯ. ಏಕೆಂದರೆ, ನೀವು ಯಾವುದೇ ಉದ್ಯಮ ಅಥವಾ ಹೂಡಿಕೆ ಮಾಡುವ ಮೊದಲು ನಿಮಗೆ ಬೇಕಾಗುವುದು ಹಣದ ಬಂಡವಾಳ. ಹಾಗಾಗಿ, ನೀವು ನಿಮ್ಮ ಬಳಿ ಎಷ್ಟು ಸಾಧ್ಯ ಆಗುತ್ತದೆಯೋ ಅಷ್ಟು ಹಣವನ್ನು ಉಳಿತಾಯ ಮಾಡಿ. ನಂತರ, ನೀವು ನಿಮ್ಮದೇ ಸ್ವಂತ ಉದ್ಯಮ ಅಥವಾ ನಿಮಗೆ ಚೆನ್ನಾಗಿ ತಿಳಿದಿರುವ ಕಡೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ. ಆದರೆ, ನಿಮಗೆ ತಿಳಿಯದೆ ಇರುವ ವಿಷಯಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ, ನಿಮ್ಮ ಬಂಡವಾಳ ನಷ್ಟವಾದರೆ ಅದನ್ನು ಪುನಃ ಸಂಪಾದನೆ ಮಾಡುವುದು ತುಂಬಾ ಕಷ್ಟ ಆಗುತ್ತದೆ ಮತ್ತು ನೀವು ಹಣದ ವಿಷಯದಲ್ಲಿ ಬಹಳ ಹಿಂದೆ ಹೋಗುತ್ತೀರಿ. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದರಿಂದ ಹಲವು ಲಾಭವನ್ನು ಪಡೆಯಬಹುದು . ಇಲ್ಲಿ ನೀವು ನಿಮ್ಮ ಬುದ್ಧಿ ಉಪಯೋಗಿಸಿ ನಿಮ್ಮ ಬಳಿ ಇರುವ ಬಂಡವಾಳವನ್ನು ಹೂಡಿಕೆ ಮಾಡುತ್ತೀರಿ ಅದನ್ನು ಹೊರತುಪಡಿಸಿ ನೀವೇ ಖುದ್ದಾಗಿ ಬಿಸಿನೆಸ್ ಅನ್ನು ನಡೆಸುವ ಯೋಚನೆ ಇರುವುದಿಲ್ಲ ಅಲ್ಲದೆ, ನಿಮಗೆ ಯಾವ ಕಂಪನಿ ಇಷ್ಟ ಆಗುತ್ತದೆಯೋ ಅಂತಹ ಕಂಪನಿಯಲ್ಲಿ ಹೂಡಿಕೆ ಮಾಡಬಹುದು. ಹಾಗೂ ನಿಮ್ಮ ಹೂಡಿಕೆಯನ್ನು ಇತರ ಹೂಡಿಕೆಗೆ ಹೋಲಿಸಿದರೆ ಇಲ್ಲಿ ಬಹಳ ಸುಲಭವಾಗಿ ಹಿಂದಕ್ಕೆ ಪಡೆಯಬಹುದು. ಇನ್ನೊಂದು ಮುಖ್ಯ ವಿಶೇಷ ಏನೆಂದರೆ, ಇಲ್ಲಿ ನೀವು ಬಹಳ ಕಡಿಮೆ ಹಣದಿಂದ ಕೂಡ ಹೂಡಿಕೆಯನ್ನು ಆರಂಭಿಸಬಹುದು. ಇದು ಕೇವಲ ನಮ್ಮ ಅನಿಸಿಕೆ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.