HOME AND BUSINESS

 ದುಡಿಯಲು ಆರಂಭಿಸುತ್ತಿದ್ದಂತೆ ನಮ್ಮ ದೇಶದಲ್ಲಿ  ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಹೇಳುವ ಮಾತು , ದುಡಿದ ಹಣವನ್ನು ಉಳಿತಾಯ ಮಾಡಿ ಆದಷ್ಟು ಬೇಗ ಸಾಲ ಮಾಡಿಯಾದರೂ ಒಂದು ಸ್ವಂತ ಮನೆ ಮಾಡಿ. ಇದು ತಪ್ಪಲ್ಲ ಆದರೆ, ನಾವು ಆರಾಮವಾಗಿ ಉಳಿಯಲು ಒಂದು ಮನೆ ಬೇಕು ಎಂದುಕೊಳ್ಳುವಂತೆ , ನಾವು ದುಡಿದು ಉಳಿತಾಯ ಮಾಡಿದ ಹಣ ನಮಗೋಸ್ಕರ ಡುಡಿಯುವಂತೆ ಮಾಡಲು ಅದಕ್ಕೆ ಒಂದು ಕಡೆ ಜಾಗ ಮಾಡಿಕೊಡಬೇಕಲ್ಲವೇ? ಗಮನಿಸಿ, ನೀವು ನಿಮ್ಮ ಮನೆಗೆ ಎಷ್ಟೇ ಹಣವನ್ನು ಹಾಕಿದರು  ಅದು ಕೇವಲ ನಿಮ್ಮ ಖರ್ಚು ಅಥವಾ ಜವಾಬ್ದಾರಿ ಆಗಿರುತ್ತದೆ. ಅಂದರೆ, ಅದು ನಿಮಗೆ ಪ್ರತಿಯಾಗಿ ಯಾವುದೇ ಹಣವನ್ನು ಸಂಪಾದಿಸಿ ಕೊಡುವುದಿಲ್ಲ . ಬದಲಾಗಿ ನಿಮ್ಮಿಂದ ಸಾಕಷ್ಟು ಹಣವನ್ನು ತೆಗೆದುಕೊಳ್ಳುತ್ತದೆ. ಇಲ್ಲಿ ಬರೆಯಲು ಹೊರಟಿರುವ ವಿಷಯ ಏನೆಂದರೆ, ನೀವು ದುಡಿಯಲು ಆರಂಭಿಸುತ್ತಿದ್ದಂತೆ ಆದಷ್ಟು ಹಣವನ್ನು ಉಳಿತಾಯ ಮಾಡಿರಿ. ಹಾಗೆಯೇ, ನಿಮ್ಮ ಉಳಿತಾಯದ ಹಣವನ್ನು ನಿಮಗೆ ಚೆನ್ನಾಗಿ ತಿಳಿದಿರುವ ಕಡೆಗಳಲ್ಲಿ ಹೂಡಿಕೆ ಮಾಡಿ . ಆ ಹೂಡಿಕೆ ಇಂದ ಒಳ್ಳೆಯ ಲಾಭ ಬರಲು ಆರಂಭ ಆದಾಗಿನಿಂದ ನೀವು ಆ ಲಾಭದ ಹಣವನ್ನು  ನಿಮ್ಮ ಮನೆ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಿ ಅಥವಾ ಸಾಲವನ್ನು ತೆಗೆದುಕೊಂಡು ಮನೆಯನ್ನು ನಿರ್ಮಾಣ ಮಾಡಿ ನಂತರ ನಿಮ್ಮ ಹೂಡಿಕೆಯ ಲಾಭದಿಂದ ಆ ಸಾಲವನ್ನು ಮರುಪಾವತಿ ಮಾಡುತ್ತಾ ಇರಬಹುದು. ಹೀಗೆ ಮಾಡುವುದರಿಂದ ನಿಮ್ಮ ಉಳಿತಾಯದ ಹಣ ಒಂದು ಕಡೆ ನಿಮಗಾಗಿ ಕೆಲಸ ಮಾಡುತ್ತಾ ಹಣವನ್ನು ಸಂಪಾದನೆ ಮಾಡುತ್ತಿರುತ್ತದೆ ಮತ್ತು ಮನೆ ಕಟ್ಟಲು ನಿಮ್ಮ ಉಳಿತಾಯದ ಹಣವನ್ನು ವಿನಿಯೋಗಿಸಬೇಕೆಂದು ಇರುವುದಿಲ್ಲ . ಹಾಗೆಯೇ, ನಿಮ್ಮ ಉಳಿತಾಯವೂ ಹೆಚ್ಚಾಗುತ್ತಾ ಇರುತ್ತದೆ . ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ . ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ