CONTENT IS KING

ನೀವು ಸ್ವಂತ ವೆಬ್ ಸೈಟ್ ಅಥವಾ ಯಾವುದಾದರೂ ಒಂದು ಸೋಶಿಯಲ್ ಮೀಡಿಯಾ ಇಂದ ಹಣವನ್ನು ಗಳಿಸುವ ಬಗ್ಗೆ ಯೋಚನೆ  ಮಾಡುತ್ತಾ ಇದ್ದೀರಿ ಎಂದರೆ ಮೊದಲು ನೀವು ಗಮನ ನೀಡಬೇಕಾಗಿರುವುದು ನಿಮ್ಮ ಕಂಟೆಂಟ್ ನ ಮೇಲೆ . ಏಕೆಂದರೆ, ನೀವು ಯಾರಿಗಾದರೂ ಸಹಾಯ ಆಗುವಂತೆ ಏನಾದರೂ ಮಾಡಿದರೆ ಮಾತ್ರ ಜನರು ನಿಮಗೆ ಹಣ ನೀಡುತ್ತಾರೆ. ನಿಮ್ಮ ಕಂಟೆಟ್ ವಿಭಿನ್ನ ಆಗಿ ಸರಳ ಆಗಿರಬೇಕು. ಇದರಿಂದ ಜನರು ನಿಮ್ಮ ಪೇಜ್ ಗೆ ಭೇಟಿ ನೀಡುವ ಸಂಭವ ತುಂಬಾ ಜಾಸ್ತಿ ಆಗುತ್ತದೆ. ಹಾಗೆಯೇ, ನೀವು ನೀಡುವಂತಹ ವಿಷಯವು ಜನರಿಗೆ ಅವರ ದಿನ ನಿತ್ಯದ ಕೆಲಸಗಳಿಗೆ ಸಹಾಯ ಮಾಡುವಂತೆ ಇರಬೇಕು. ಇನ್ನು ಭಾಷೆ ವಿಷಯಕ್ಕೆ ಬಂದರೆ ನಿಮಗೆ ಯಾವ ಭಾಷೆಯಲ್ಲಿ ಚೆನ್ನಾಗಿ ಓದಲು ಬರೆಯಲು ಮತ್ತು ಅರ್ಥ ಮಾಡಿಕೊಳ್ಳಲು ಬರುತ್ತದೆ ಅಂತಹ ಭಾಷೆಯಲ್ಲಿ ಆರಂಭಿಸಿ. ಹೀಗೆ ಮಾಡುವುದರಿಂದ ನಿಮಗೆ ವಿಷಯವನ್ನು ರಚನೆ ಮಾಡಲು ಸುಲಭ ಮತ್ತು ಕಡಿಮೆ ಸಮಯ ಸಾಕಾಗುತ್ತದೆ. ಹಾಗೂ ನಿಮ್ಮ ಭಾಷೆಯಲ್ಲಿ ಆರಂಭಿಸಿದರೆ ನೀವು ಅಂದುಕೊಂಡಂತೆ ವಿಷಯವನ್ನು ರಚಿಸಬಹುದು. ಇನ್ನು ಯಶಸ್ಸಿನ ವಿಷಯಕ್ಕೆ ಬಂದರೆ ಇದು ಸಂಪೂರ್ಣ ನಿಮ್ಮ ಶ್ರಮ ಮತ್ತು ನೀವು ಎಷ್ಟು ಸಮಯ ನೀಡುತ್ತಿದ್ದೀರಿ ಹಾಗೆಯೇ ನೀವು  ಯಾವ ರೀತಿಯ ವಿಷಯವನ್ನು ನೀಡುತ್ತಿದ್ದೀರಿ ಎನ್ನುವುದರ  ಮೇಲೆ ನಿಂತಿರುತ್ತದೆ. ಯಾವುದೆ ವಿಷಯವನ್ನು ನಕಲಿ ಮಾಡಬೇಡಿ . ಮೊದಲು ಚೆನ್ನಾಗಿ ತಿಳಿದುಕೊಂಡು ಆ ನಂತರ ನಿಮ್ಮದೇ  ಸ್ವಂತ ರಚನೆಯನ್ನು ನೀಡಿ ಜನರಿಗೆ ತಲುಪಿಸಿ. ಇದು ಕೇವಲ  ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.