NOT TIMING THE MARKET TIME IN THE MARKET

 STOCK MARKET ನಲ್ಲಿ ಲಾಭ ಪಡೆಯಬೇಕು ಎಂದಾದರೆ ಮೊದಲು ನೀವು ಮಾರ್ಕೆಟ್ ಅನ್ನು FREDICT ಮಾಡುವುದನ್ನು ನಿಲ್ಲಿಸಿ. ಏಕೆಂದರೆ, ಇದು ನಿಮ್ಮ ಬಂಡವಾಳವನ್ನು ಹಾಗೆಯೇ ನಿಮ್ಮ ನೆಮ್ಮದಿಯನ್ನು ನಷ್ಟ ಮಾಡಬಹುದು. ಯಾವಾಗಲೂ ಹೂಡಿಕೆ ಮಾಡುವವರು  ತಾಳ್ಮೆ ಇರಿಸಿಕೊಳ್ಳಬೇಕು ಹಾಗಾದಾಗ ಮಾತ್ರ ನಿಮ್ಮಿಂದ ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಮಾಡಲು ಸಾಧ್ಯ ಆಗುತ್ತದೆ. ಇಲ್ಲವಾದರೆ ಖಂಡಿತಾ ನೀವು ನಿಮ್ಮ ಎಲ್ಲಾ ಬಂಡವಾಳವನ್ನು ಕಳೆದುಕೊಳ್ಳುತ್ತೀರಿ. ಇಂದು ಯಾವ ಸ್ಟಾಕ್ ನ ಬೆಲೆ ಮೇಲೆ ಹೋಗಬಹುದು ಅಥವಾ ಇಳಿಯಬಹುದು ಎಂದು ಫ್ರೆಡಿಕ್ಟ್ ಮಾಡುತ್ತಾ ಇದ್ದರೆ ಅನಗತ್ಯವಾಗಿ ನೀವು ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿದಂತೆ ಆಗುತ್ತದೆ. ಆರಾಮವಾಗಿ ಹೂಡಿಕೆ ಮಾಡಿ . ಹೂಡಿಕೆ ಮಾಡುವ ಮುನ್ನ ಒಂದು ಬಾರಿ ನೀವು ಆರಿಸಿಕೊಳ್ಳುವ ಕಂಪನಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ ನಂತರ ಹೂಡಿಕೆ  ಆರಂಭಿಸಿ. ಇದರಿಂದ ನೀವು ನಂತರದ ಸಮಯದಲ್ಲಿ ಕಷ್ಟ ಪಡುವ ಅಗತ್ಯ ಬರುವುದಿಲ್ಲ. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ  ನಮ್ಮ ಸಲಹೆ ಆಗಿರುವುದಿಲ್ಲ.