FUNDAMENTAL AND TECHNICAL ANALYSIS
ಸ್ಟಾಕ್ ಮಾರ್ಕೆಟ್ ನಲ್ಲಿ ನೀವು ಹೂಡಿಕೆ ಅಥವಾ ಟ್ರೇಡಿಂಗ್ ಮಾಡುವಾಗ ಈ ಪದವನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೀರಿ. ನೀವು ಟ್ರೇಡರ್ ಆಗಬೇಕೆಂದರೆ ನಿಮಗೆ ಚೆನ್ನಾಗಿ ಟೆಕ್ನಿಕಲ್ ಅನಾಲಿಸಿಸ್ ಮಾಡಲು ಬರಬೇಕಾಗುತ್ತದೆ. ಅದೇ ರೀತಿ ನೀವೇನಾದರೂ ಹೂಡಿಕೆ ಮಾಡುವ ಯೋಚನೆ ಮಾಡುತ್ತಿದ್ದರೆ ನಿಮಗೆ ಫಂಡಮೆಂಟಲ್ ಅನಾಲಿಸಿಸ್ ಮಾಡಲು ಬರಬೇಕಾಗುತ್ತದೆ. ಟೆಕ್ನಿಕಲ್ ಅನಾಲಿಸಿಸ್ ಸ್ಟಾಕ್ ನ ಬೆಲೆ ಮೇಲೆ ಹೋಗಬಹುದೇ ಅಥವಾ ಕೆಳಕ್ಕೆ ಇಳಿಯಬಹುದೇ ಎಂದು ತಿಳಿಯಲು ಕೇವಲ ಆ ಷೇರಿನ ಕೆಲವು ಹಿಂದಿನ ದಿನಗಳ ಬೆಲೆಯನ್ನು ಇಟ್ಟುಕೊಂಡು ಹಲವು ಟೆಕ್ನಿಕಲ್ ಅನಾಲಿಸಿಸ್ ಟೂಲ್ಸ್ ಅನ್ನು ಬಳಸಿಕೊಂಡು ಟ್ರೇಡ್ ಮಾಡುವ ವಿಧಾನ. ಅದೇ ರೀತಿ ಫಂಡಮೆಂಟಲ್ ಅನಾಲಿಸಿಸ್ ನಲ್ಲಿ ಷೇರಿನ ಹಿಂದಿನ ದಿನಗಳ ಬೆಲೆ, ಕಂಪನಿಯ ಆದಾಯ, ಲಾಭ, ನಷ್ಟ, ಕಂಪನಿಯ ಮುಂದಿನ ಗುರಿ, ಕಂಪನಿಯ ಮ್ಯಾನೇಜ್ಮೆಂಟ್ ಇಂತಹ ಹಲವು ವಿಷಯವನ್ನು ಆಧಾರವಾಗಿಟ್ಟುಕೊಂಡು ಹೂಡಿಕೆ ಮಾಡುವ ವಿಧಾನ ಆಗಿದೆ. ಟೆಕ್ನಿಕಲ್ ಅನಾಲಿಸಿಸ್ ಗೆ ಹೋಲಿಸಿದರೆ ಫಂಡಮೆಂಟಲ್ ಅನಾಲಿಸಿಸ್ ತುಂಬಾ ಪರಿಣಾಮಕಾರಿ ಮತ್ತು ಸುಲಭ ಆಗಿರುತ್ತದೆ. ನೀವು ಟ್ರೇಡರ್ ಆಗುವುದಾದರೆ ನಿಮಗೆ ಟೆಕ್ನಿಕಲ್ ಅನಾಲಿಸಿಸ್ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ಹಾಗೆಯೇ, ನೀವು ಹೂಡಿಕೆ ಮಾಡಲು ನಿಮಗೆ ಫಂಡಮೆಂಟಲ್ ಅನಾಲಿಸಿಸ್ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ಇದು ಕೇವಲ ನಮ್ಮ ಅನಿಸಿಕೆ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.