INTRADAY TRADING
STOCK MARKET ನಲ್ಲಿ ಈ ಟ್ರೇಡಿಂಗ್ ವಿಧಾನ ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ. ಕಾರಣ, ಇದರಲ್ಲಿ ನಿಮಗೆ ನಿಮ್ಮ ಬಂಡವಾಳದ ಮೊತ್ತಕ್ಕೆ 5 x MARGIN MONEY ಯಾನ್ನು ನೀಡಲಾಗುತ್ತದೆ. ಅಂದರೆ, ನಿಮ್ಮ ಬಳಿ 100000 ರೂಪಾಯಿ ಬಂಡವಾಳ ಇದ್ದರೂ ನೀವು 500000 ರೂಪಾಯಿಯ ಟ್ರೇಡ್ ಅನ್ನು ಮಾಡಬಹುದು. ಇದರಿಂದ ನಿಮ್ಮ ಲಾಭ ಹೆಚ್ಚಾಗುತ್ತದೆ. ಅದೇ ವೇಳೆ ನಿಮಗೆ ನಷ್ಟ ಆದರೆ ಅದು ಕೂಡ ಹೆಚ್ಚಾಗಿಯೇ ಆಗುತ್ತದೆ. ಇನ್ನು ನೀವು ಇಲ್ಲಿ ಯಾವುದೇ ಸ್ಟಾಕ್ ಅನ್ನು ಮೊದಲು ಖರೀದಿಸಿ ನಂತರ ಮಾರಾಟ ಮಾಡಬಹುದು ಅಥವಾ ಮೊದಲು ಮಾರಾಟ ಮಾಡಿ ನಂತರ ಖರೀದಿ ಮಾಡಬಹುದು. ಹೀಗೆ ಮಾಡುವುದನ್ನು SHORT SELL ಎಂದು ಕರೆಯಲಾಗುತ್ತದೆ. ಹಾಗೆಯೇ, ಇಲ್ಲಿ ನೀವು ನಿಮ್ಮ ವ್ಯವಹಾರವನ್ನು ಕೇವಲ ಒಂದೇ ದಿನದಲ್ಲಿ ಮಾಡಿ ಮುಗಿಸಬೇಕು ಇದು ಇದರ ಒಂದು RUELS ಆಗಿದೆ. ಎಲ್ಲಾ ಹಣವನ್ನು INTRADAY ಟ್ರೇಡಿಂಗ್ ನಲ್ಲಿ ಹಾಕಿ ಟ್ರೇಡ್ ಮಾಡುವುದು ಅಷ್ಟೊಂದು ಸುರಕ್ಷಿತ ಆಗಿರುವುದಿಲ್ಲ. ನೀವು intraday ಮಾಡುವ ಬದಲು SHORT TERM ಮಾಡಬಹುದು ಇದು ನಿಮಗೆ ಸ್ವಲ್ಪ ಆರಾಮವಾಗಿ ಇರಬಹುದು. ಅದೇ ರೀತಿ ಲಾಂಗ್ ಟರ್ಮ್ ಟ್ರೇಡಿಂಗ್ ಅಥವಾ INVESTMENT ಮಾಡಿದರೆ ಇನ್ನು ಉತ್ತಮ ಆಗಿರುತ್ತದೆ. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.