OWN WEBSITE
ನಿಮ್ಮದೇ ಆದ ಸ್ವಂತ ವೆಬ್ ಸೈಟ್ ಆರಂಭಿಸಿ ಹಣ ಸಂಪಾದನೆ ಮಾಡಲು ಯೋಚನೆ ಮಾಡುತ್ತಿದ್ದೀರಾ ? ಇಂದಿನ ದಿನದಲ್ಲಿ ಇದು ಬಹಳ ಸುಲಭ ಮತ್ತು ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಆಗುತ್ತದೆ. ವೆಬ್ ಸೈಟ್ ತಯಾರು ಮಾಡುವುದು ಹೆಚ್ಚಿನ ಕೆಲಸ ಆಗಿರುವುದಿಲ್ಲ ಬದಲಾಗಿ ನಿಮ್ಮ ವೆಬ್ ಸೈಟ್ ಅನ್ನು ನೀವು ಎಷ್ಟು ಯಶಸ್ವಿಯಾಗಿ ನಡೆಸುತ್ತೀರಿ ಎನ್ನುವುದು ಮುಖ್ಯ ಆಗುತ್ತದೆ. ಇನ್ನು ಮೊದಲು ನೀವು ಯಾವ ರೀತಿಯ ವೆಬ್ ಸೈಟ್ ಅನ್ನು ತಯಾರು ಮಾಡಲು ಯೋಚಿಸಿದ್ದೀರಿ ಎಂದು ಅದನ್ನು ನಿರ್ಧಾರ ಮಾಡಿ . ಹಾಗೆಯೇ, ನೀವು domain name ಖರೀದಿ ಮಾಡಬೇಕಾಗುತ್ತದೆ . Domain name ನಿಮಗೆ ಉಚಿತವಾಗಿಯೂ ಸಿಗುತ್ತದೆ . ಆದರೆ , ನೀವು ಖರೀದಿ ಮಾಡುವುದು ಉತ್ತಮ . ಹಾಗೆಯೇ , ನೀವು ನಿಮ್ಮ ವೆಬ್ ಸೈಟ್ ನಲ್ಲಿ ವಿಷಯವನ್ನು ಯಾವ ರೀತಿಯಲ್ಲಿ ನೀಡಲು ನಿರ್ಧರಿಸಿದ್ದೀರಿ ಎನ್ನುವುದು ಕೂಡ ಮುಖ್ಯ ಆಗುತ್ತದೆ . ಏಕೆಂದರೆ, ನೀವೇನಾದರೂ ವಿಡಿಯೋದ ಮೂಲಕ ವಿಷಯವನ್ನು ನೀಡಲು ಯೋಚಿಸುತ್ತಿದ್ದರೆ ಸ್ವಂತ ವೆಬ್ ಸೈಟ್ ಮಾಡುವ ಬದಲು ಉಚಿತವಾಗಿ ಮತ್ತು ಸುಲಭವಾಗಿ ಹಾಗೂ ಬಹಳ ಪ್ರಸಿದ್ಧಿ ಆಗಿರುವ YOUTUBE ಅನ್ನು ಬಳಸಿಕೊಳ್ಳಬಹುದು. ಒಂದು ವೇಳೆ ನೀವೇನಾದರೂ ಪಠ್ಯ ಆಧಾರಿತ ವಿಷಯವನ್ನು ನೀಡಲು ಯೋಚಿಸಿದ್ದರೆ ಸ್ವಂತ ವೆಬ್ ಸೈಟ್ ಅನ್ನು ಆರಂಭಿಸಿ. ಕೇವಲ ವಿಷಯವನ್ನು ಓದುಗರಿಗೆ ನೀಡುವಂತಹ ವೆಬ್ ಸೈಟ್ ಮಾಡಲು ನಿಮಗೆ ಸ್ವಲ್ಪ HTML , CSS , ಮತ್ತು JAVASCRIPT ಬಗ್ಗೆ ತಿಳಿದಿದ್ದರೆ ಸಾಕಾಗುತ್ತದೆ . ಹಾಗೆಯೇ , ನೀವೇನಾದರೂ ನಿಮ್ಮ USERS ಇಂದ ಯಾವುದಾದರೂ INPUT ತೆಗೆದುಕೊಳ್ಳುವಂತೆ ಮಾಡಲು ಯೋಚಿಸಿದ್ದರೆ ನಿಮಗೆ BACKEND LANGUAGE ಬಗ್ಗೆ ತಿಳುವಳಿಕೆ ಇರಬೇಕಾಗುತ್ತದೆ . ಇದರ ಬದಲು ನೀವು ನೇರವಾಗಿ ಆನ್ಲೈನ್ ನಲ್ಲಿ ಸಿಗುವ TEMPLATE ಅನ್ನು ಕೂಡ ಬಳಸಬಹುದು ಇದಕ್ಕೆ ನಿಮಗೆ ಕೋಡಿಂಗ್ ಬರಬೇಕು ಎನ್ನುವ ಯಾವುದೇ ಯೋಚನೆ ಇರುವುದಿಲ್ಲ. ಇನ್ನು ವೆಬ್ ಸೈಟ್ ಮಾಡಿ ಹಣ ಗಳಿಸಲು ಹಲವಾರು ದಾರಿಗಳಿವೆ ಆದರೆ ಬಹುತೇಕ ಎಲ್ಲರೂ ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುವ ದಾರಿ ಜಾಹೀರಾತು. ನಿಮ್ಮ ವೆಬ್ ಸೈಟ್ ನಲ್ಲಿ ಬೇರೆಯವರ ಜಾಹೀರಾತನ್ನು ಇರಿಸಿ ನೀವು ಹಣವನ್ನು ಸಂಪಾದನೆ ಮಾಡಬಹುದು. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ . ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ .