BEST COMPANES FOR INVESTMENT
STOCK MARKET ನಲ್ಲಿ ಹೂಡಿಕೆ ಮಾಡುವ ಮೊದಲು ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ಎನ್ನುವ ಯೋಚನೆ ಬರುವುದು ಸಾಮಾನ್ಯ ಸಂಗತಿ ಆಗಿದೆ. ಏಕೆಂದರೆ, ಇಲ್ಲಿ ನಾವು ಕಷ್ಟಪಟ್ಟು ದುಡಿದ ಹಣವನ್ನು ತಂದು ಹೂಡಿಕೆ ಮಾಡುತ್ತೇವೆ ಹಾಗಾಗಿ ಒಂದು ಸಲ ನಾವು ಹೂಡಿಕೆ ಮಾಡುವ ಮೊದಲು ಕಂಪನಿಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ಆದರೂ ತಿಳಿದುಕೊಳ್ಳುವುದು ಅಗತ್ಯ ಆಗಿರುತ್ತದೆ. ಹೆಚ್ಚಿನ ಲಾಭವನ್ನು ನೀಡುವುದು ಸಾಮಾನ್ಯವಾಗಿ ಹೊಸ ಕಂಪನಿಗಳೇ ಆಗಿರುತ್ತದೆ. ಆದರೆ, ಹೂಡಿಕೆಯ ಸುರಕ್ಷೆಯ ದೃಷ್ಟಿಯಿಂದ ಸ್ವಲ್ಪ ಹಳೆಯ ಹಾಗೂ ಈಗಾಗಲೇ ಬಿಸಿನೆಸ್ ವಿಷಯದಲ್ಲಿ ದೃಢವಾಗಿ ನಿಂತಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಒಳ್ಳೆಯದು ಆಗಿರುತ್ತದೆ. ಅಂತಹ ಕೆಲವು ಕಂಪನಿಗಳು ಯಾವುವೆಂದರೆ, TATA MOTORS , RELIANCE INDUSTRIES , ASIAN PAINTS , INFOSYS , TCS , NESTLE , SBI ಮುಂತಾದವು . ಒಳ್ಳೆಯ ಸುರಕ್ಷೆಯ ಜೊತೆಗೆ ಒಳ್ಳೆಯ ಸಾಧಾರಣ ಲಾಭ ಪಡೆಯುದಾದರೆ ನೀವು ಈ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು . ನಿಮಗೆ ಹೆಚ್ಚಿನ ಲಾಭ ಬೇಕೆಂದರೆ ಸಾಧಾರಣ ಸುರಕ್ಷೆ ಇರುತ್ತದೆ. ಅಂದರೆ, ನೀವು ಸಣ್ಣ ಕಂಪನಿ ಅಥವಾ ಹೊಸ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಲಾಭ ಜಾಸ್ತಿ ಸಿಗಬಹುದು . ಆದರೆ, ನಷ್ಟ ಆಗುವ ಸಂಭವ ಕೂಡ ಇರುತ್ತದೆ .SUZLON , ZOMATO , YES BANK ಮುಂತಾದ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ . ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.