SEARCH ENGINE AND WEB SITE

ನಮ್ಮಲ್ಲಿ GOOGLE ಬಳಕೆ ಮಾಡದೇ ಇರುವವರು ಯಾರೂ ಇರಲು ಸಾಧ್ಯವಿಲ್ಲ . ಎಷ್ಟರ ಮಟ್ಟಿಗೆ ನಾವು ಇದನ್ನು ಬಳಸುತ್ತೇವೆ ಎಂದರೆ ನಾವು ಆನ್ಲೈನ್ ನಲ್ಲಿ ಯಾವುದೇ ವ್ಯವಹಾರವನ್ನು ಮಾಡುವ ಮೊದಲು ಗೂಗಲ್ ಇಂದಲೇ ಆರಂಭಿಸುತ್ತೇವೆ . ಗೂಗಲ್ ಒಂದು SERCH ENGINE ಆಗಿದೆ. ಹಾಗಾದರೆ search engine ಎಂದರೆ ಏನು ? ಸರಳವಾಗಿ ಯಾವುದೇ ಒಂದು search engine ನಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಹುಡುಕಲು ಸಹಾಯ ಮಾಡುತ್ತದೆ. ಇದನ್ನು ತಯಾರು ಮಾಡಿರುವ ಉದ್ದೇಶ ಕೂಡ ಇದೆ ಆಗಿದೆ . ಹಾಗಾದರೆ ಸರ್ಚ್ ಎಂಜಿನ್ ಮಾಹಿತಿಯನ್ನು ಹೇಗೆ ಒದಗಿಸುತ್ತವೆ ? ಅಲ್ಲವೇ . ನಿಮಗೆ ತಿಳಿದಿದೆ ಹಲವಾರು ವಿವಿಧ ಮಾಹಿತಿಯನ್ನು ಹೊಂದಿರುವ ಅಸಂಖ್ಯಾತ ವೆಬ್ ಸೈಟ್ ಗಳು  ಇವೆ ಎಂದು. ಇಂತಹ ವೆಬ್ ಸೈಟ್ ಗಳು search engina ನಲ್ಲಿ  INDEX ಆಗಿರುತ್ತವೆ. ಆಗ ಆಯಾ ವೆಬ್ ಸೈಟ್ ಗಳ ಮಾಹಿತಿಯನ್ನು search engin ಗಳು ತಮ್ಮ ಬಳಿ ಶೇಖರಿಸಿ ಇಟ್ಟುಕೊಂಡಿರುತ್ತವೆ. ಬಳಕೆ ಮಾಡುವವರು ಸರ್ಚ್ ಇಂಜಿನ್ ನಲ್ಲಿ ಯಾವುದಾದರೂ ವಿಷಯವನ್ನು ಟೈಪ್ ಮಾಡುತ್ತಿದ್ದಂತೆ ಆಯಾ ವಿಷಯವು ಯಾವ ಯಾವ ವೆಬ್ ಸೈಟ್ ನಲ್ಲಿ ಇದೆ ಎಂದು ಹುಡುಕಿ ಅದರಲ್ಲಿ ಒಳ್ಳೆಯ ಹೊಂದಾಣಿಕೆ ಇರುವ ವೆಬ್ ಸೈಟ್ ಅನ್ನು ಬಳಕೆ ಮಾಡುವವರಿಗೆ ತಂದು ಕೊಡುತ್ತದೆ. ಇನ್ನು ವೆಬ್ ಸೈಟ್ ಕೇವಲ ತನ್ನದೇ ಆದ ವಿಷಯವನ್ನು ಹೊಂದಿದ್ದು ಅದನ್ನು ಬಳಕೆ ಮಾಡುವವರಿಗೆ ನೀಡುತ್ತದೆ. ಹಲವಾರು ವಿಷಯದ ಮೇಲೆ ಹಲವಾರು ವೆಬ್ ಸೈಟ್ ಗಳು ಇರುತ್ತವೆ . ಒಂದು ವೇಳೆ ಸರ್ಚ್ ಎಂಜಿನ್ ಇಲ್ಲದೆ ಇದ್ದಲ್ಲಿ ನೀವು ನಿಮಗೆ ಬೇಕಾದ ವೆಬ್ ಸೈಟ್ ಅನ್ನು BROWSER ಗಳಲ್ಲಿ ಟೈಪ್ ಮಾಡಿ ಅದನ್ನು ನೋಡಬೇಕಾಗುತ್ತದೆ. ಇದು ಕಷ್ಟದ ಕೆಲಸ ಆಗಿರುತ್ತಿತ್ತು. ವೆಬ್ ಸೈಟ್ ಅನ್ನು ಭೇಟಿ ನೀಡಲು ನಿಮಗೆ ಸರ್ಚ್ ಎಂಜಿನ್ ಅಗತ್ಯವಾಗಿ ಬೇಕೆಂದಿಲ್ಲ. ನೇರವಾಗಿ ವೆಬ್ ಸೈಟ್ URL ಅನ್ನು BROWSER ನಲ್ಲಿ ಟೈಪ್ ಮಾಡಿ ವೀಕ್ಷಿಸಬಹುದು. ಇದು ಕೇವಲ ನಮ್ಮ ಅನಿಸಿಕೆ ಮಾತ್ರ  ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ .